ವರ್ಕರ್ ದೂರು
ಉತ್ತರಅಮೇರಿಕಾದ ವಿಶ್ವವಿದ್ಯಾಲಯಗಳಿಗಾಗಿ ಗಾರ್ಮೆಂಟ್ ಮತ್ತುಇತರ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ತೊಂದರೆಗಳು ಇವೆ ಎಂದು ಕಾರ್ಮಿಕರ ದೂರಿನ ಮೂಲಕ ಅಥವಾ ಬೇರೆ ಕಡೆಯಿಂದ ಗೊತ್ತಾದಲ್ಲಿ ಆ ಕಾರ್ಖಾನೆಯ ಕಾರ್ಮಿಕರ ಕೆಲಸದ ಸ್ಥಿತಿಗಳ ಬಗ್ಗೆ WRC ತನಿಖೆ ಪ್ರಾರಂಭಿಸುತ್ತಿದೆ. ಈ ತನಿಖೆಗಳಲ್ಲಿ ಕೆಲಸದ ಸ್ಥಳದ ಹೊರಗೆ, ಎಲ್ಲಿ ಅವರಿಗೆ ಮಾತನಾಡಲು ಸುಲಭವಾಗುವುದೋ ಅಂತಹ ಸ್ಥಳದಲ್ಲಿ ಕಾರ್ಮಿಕರೊಂದಿಗೆ ಸಂದರ್ಶನ, ವಿಷಯಕ್ಕೆ ಸಂಬಂಧ ಪಟ್ಟಂತಹ ಕಾಗದ ಪತ್ರಗಳನ್ನು ಕಲೆ ಹಾಕುವುದು, ಆಡಳಿತ ವರ್ಗದ ಅಧಿಕಾರಿಗಳೊಂದಿಗೆ ಮತ್ತು ವಿಷಯದ ಬಗ್ಗೆ ಹೆಚ್ಚು ತಿಳಿದಿರುವವರೊಂದಿಗೆ ಭೇಟಿ ಮಾಡುವುದು ಸೇರಿರುತ್ತದೆ. ಯಾವುದೇ ಕಾರ್ಖಾಯಲ್ಲಿ ಉಲ್ಲಂಘನೆಕಂಡಲ್ಲಿ, WRC ಅದನ್ನು ಸರಿಪಡಿಸುವ ರೀತಿಗಳ ವಿಷಯವಾಗಿ ಸಲಹೆ ನೀಡುತ್ತದೆ.
ಸಾಮನ್ಯವಾಗಿ ಕಾರ್ಮಿಕರ ದೂರುಗಳು WRC ಯನ್ನು WRC ಸಿಬ್ಬಂದಿಯ ಸಂಪರ್ಕದಲ್ಲಿರುವ ಸಾಮಾಜಿಕ ಅಥವ ಕಾರ್ಮಿಕ ಸಂಘಟನೆಗಳ ಮೂಲಕ ತಲುಪುತ್ತವೆ. ಕೆಲಸಗಾರರು ಅಥವಾ ಅವರ ಪ್ರತಿನಿಧಿಗಳು WRC ಸಿಬ್ಬಂದಿಗೆ ಇ-ಮೇಲ್ ಮೂಲಕ WRC ಗೆ ಕುಂದುಕೊರತೆಗಳನ್ನು ತಿಳಿಸಬಹುದು. ಸಂದೇಶವನ್ನು ಕಳುಹಿಸುವಾಗ, ದಯವಿಟ್ಟು ಈ ಪದಗಳನ್ನು ಸೇರಿಸಿ:
- ಕಾರ್ಖಾನೆಇರುವದೇಶ
- ಕಾರ್ಖಾನೆಯ ಹೆಸರು ಮತ್ತು ವಿಳಾ
- ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಬಗ್ಗೆ ವಿವರವಾದ ಮಾಹಿತಿ. ಸಂಬಂಧಕಾಗದ ಪತ್ರಗಳನ್ನು ಕಳುಹಿಸುವುದು ಒಳ್ಳೆಯದು.
- ದೂರಿನ ವಿಷಯದಲ್ಲಿ ಮುಂದುವರೆಯಲುತಮ್ಮನ್ನು ಸಂಪರ್ಕಿಸಲು ಮಾಹಿತಿ (ದೂರವಾಣಿ ಸಂಖ್ಯೆ ಇದ್ದರೆ ಉತ್ತಮ)
- ಕನ್ನಡದಲ್ಲಿದೂರು ಸಲ್ಲಿಸಲು, ದೂರಿನ ಸಂದೇಶವನ್ನು ಈ ಇಮೇಲ್ಗೆ ಕಳುಹಿಸಿ: [email protected]
ತಮ್ಮ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ಗುಪ್ತವಾಗಿಡುತ್ತೇವೆಂಬುದನ್ನು ಗಮನಿಸಿ. ತಮ್ಮ ಮುಂಚಿತ ಒಪ್ಪಿಗೆಯಿಲ್ಲದೆ ಈ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ. ದೂರಿನ ವಿಷಯದಲ್ಲಿ ಮುಂದುರಿಯಲುತಮ್ಮನ್ನು ಸಂಪರ್ಕಿಸಲು ಮಾತ್ರ ಈ ಮಾಹಿತಿಯನ್ನು ಉಪಯೋಗಿಸುತ್ತೇವೆ. ಪ್ರತಿಯೊಂದು ದೂರಿನ ಸಂಧರ್ಭದಲ್ಲಿ WRC ಯು ಪೂರ್ಣ ತನಿಖೆಯನ್ನು ಪ್ರಾರಂಭಿಸುವುದಿಲ್ಲವೆಂದು ದಯವಿಟ್ಟು ಗಮನಿಸಿ. WRC ಯು ಆರೋಪಿತ ಉಲ್ಲಂಘನೆಗಳ ಗಂಭೀರತೆ, ಪರಿಣಾಮಿತ ಕಾರ್ಮಿಕರ ಸಂಖ್ಯೆ, ಈ ವಿಷಯದ ಬಗ್ಗೆ ತಿಳಿದಿರುವ ಸಾಮಾಜಿಕ ಸಂಘಟನೆಗಳ ಅಭಿಪ್ರಾಯ, ವಿಶ್ವವಿದ್ಯಾಲಯಗಳ ಬ್ರಾಂಡ್ ಕಂಪನಿಗಳಿಗೆ ಆ ಕಾರ್ಖಾನೆಯೊಂದಿಗೆ ಪರಿಹಾರ ಕ್ರಮಗಳನ್ನು ಕೈ ಗೊಳ್ಳಲು ಸಾಕಷ್ಟು ಬಲವಾದ ಸಂಬಂಧವಿದೆಯಾ ಎಂಬುವುದು, ಮತ್ತು ಈ ರೀತಿಯಾದ ತನಿಖೆಗೆ ಕಾರ್ಮಿಕರ ಬೆಂಬಲವಿದೆಯಾ ಎನ್ನುವುದು, ಈ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ಮಾಡಲು ನಿರ್ಧರಿಸುತ್ತದೆ.