ನಮ್ಮ ಕೆಲಸ
WRC ಯ ಕಾರ್ಯವಿಧಾನ
ಯಾವುದೇ ಕೆಲಸದ ಸ್ಥಳದ ಬಗ್ಗೆ ಮಾಹಿತಿ ಬೇಕೆಂದರೆ ಅದಕ್ಕೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಉತ್ತಮ ಆಕರಗಳಾಗಿರುತ್ತಾರೆ, ಮತ್ತು ಈ WRC ಯು ತನ್ನ ತನಿಖಾ ವಿಧಾನದಲ್ಲಿ ಇವರನ್ನೇ ಕೇಂದ್ರೀಕರಿಸುತ್ತದೆ. ಅತಿಮುಖ್ಯವಾಗಿ WRC ಯು ಕಾರ್ಮಿಕರನ್ನು ಕಾರ್ಖಾನೆಯಿಂದ ಹೊರಗೆ, ಆಡಳಿತವರ್ಗಕ್ಕೆ ತಿಳಿಯದಂತೆ ಅಥವಾ ಅವರನ್ನು ಒಳಗೊಳ್ಳದಂತೆ ಮಾತನಾಡಿಸುವುದಿರಿಂದ ಕಾರ್ಮಿಕರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತದೆ. ಆದರೆ ಬ್ರಾಂಡ್ಗಳು ತಮ್ಮ ಸಪ್ಲೈಯರ್ಸ್ಗಳನ್ನು ತನಿಖೆ ಮಾಡುವಾಗ ಅವರು ಕಾರ್ಖಾನೆಯ ಒಳಗೇ ಮಾತನಾಡಿಸುತ್ತಾರೆ, ಕಾರ್ಮಿಕರ ನಿಜವಾದ ಪರಿಸ್ಥಿತಿಯ ಬಗ್ಗೆ ತಿಳಿಯಲು ಅಷ್ಟು ಆಸಕ್ತಿ ವಹಿಸುವುದಿಲ್ಲ. ಬ್ರಾಂಡ್ಗಳು ಮತ್ತು ಅವರ ಆಡಿಟ್ ಸಂಸ್ಥೆಗಳು ಕಾರ್ಮಿಕ ಕಾನೂನುಗಳ ಉಲ್ಲಂಘನೆಯನ್ನು ನಿರ್ಲಕ್ಷಿಸುವ ಈ ಸಾಮಾನ್ಯ ಅಂಶವು, WRC ಯು ಇದರ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಮಾಡಿದೆ.
WRC ಯು, ಯೂನಿಯನ್ಗಳು, ಮಾನವ ಹಕ್ಕು ಗುಂಪುಗಳು, ಮಹಿಳಾ ಸಂಘಟನೆಗಳು ಮತ್ತು ಇತರ ಸಾಮಾಜಿಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಒಂದು ಜಾಗತಿಕ ತನಿಖಾ ತಂಡವನ್ನು ನಿರ್ವಹಿಸುತ್ತದೆ. ತನಿಖೆ ಮಾಡಿದ ಕಾರ್ಖಾನೆಯಲ್ಲಿ ಕಂಡು ಬಂದ ಅಂಶಗಳ ಜೊತೆಗೆ ಬ್ರಾಂಡ್, ರೀಟೈಲರ್ ಮತ್ತು ಕಾರ್ಖಾನೆ ಮಾಲೀಕರ ಪ್ರತಿಕ್ರಿಯೆಗಳನ್ನೊಳಗೊಂಡ ಸಾರ್ವಜನಿಕ ವರದಿಯನ್ನು WRCಯು ತನ್ನ ಕೆಲಸದ ಭಾಗವಾಗಿ ಪ್ರಕಟಿಸುತ್ತದೆ. ಜಗತ್ತಿನಾದ್ಯಂತಹ ಬ್ರಾಂಡ್ಗಳು ಹಾಗೂ ಅವರ ಸಪ್ಲೈಯರ್ಗಳು, ತಮ್ಮ ಕಾರ್ಮಿಕರಿಗೆ ಬಾಕಿ ಇರುವ ವೇತನ ಪಾವತಿಸುವುದು, ಅನ್ಯಾಯವಾಗಿ ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರನ್ನು ಪುನ: ಕೆಲಸಕ್ಕೆ ತೆಗೆದುಕೊಳ್ಳುವುದು ಮತ್ತು ಉತ್ತಮ ಸುರಕ್ಷಾ ವ್ಯವಸ್ಥೆಯನ್ನು ರೂಪಿಸುವುದು ಇಂತಹ ಮಹತ್ವದ ಪರಿಹಾರಗಳನ್ನು ಒದಗಿಸುವಂತೆ WRC ಯು ಮಾಡಿದೆ.
ಸಪ್ಲೈಚೈನ್ನಲ್ಲಿ ವ್ಯವಸ್ಥಿತ ಬದಲಾವಣೆ ತರುವತ್ತ.. . . .
ಗ್ಲೋಬಲ್ ಸಪ್ಲೈಚೈನ್ಗಳಲ್ಲಿ ನಡೆಯುವ ಕಾರ್ಮಿಕ ಹಕ್ಕುಗಳ ಉಲ್ಲಂಘನೆಗಳ ಸ್ವರೂಪ ಮತ್ತು ಅದರ ಕಾರಣಗಳನ್ನು ಬೆಳಕಿಗೆ ತರಲು WRC ಯ ಪ್ರಯತ್ನಗಳು ಸಹಾಯ ಮಾಡುತ್ತಿವೆ. ಇದನ್ನು ಸರಿಪಡಿಸಲು ಉದ್ಯಮದಲ್ಲಿ ಇರುವ ವ್ಯವಸ್ಥೆಯ ಕೊರತೆಯನ್ನು ಅನಾವರಣಗೊಳಿಸುತ್ತಿದೆ, ಮತ್ತು ಇದನ್ನು ಪ್ರಾಮಾಣಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಚರ್ಚೆಯನ್ನು ರೂಪಿಸುತ್ತಿದೆ.
ಸಪ್ಲೈಚೈನ್ನೊಳಗೆ ಘನತೆಯ ಪರಿಸ್ಥಿತಿಯನ್ನು ಸಾಧಿಸಲು ಕೆಲವು ವ್ಯವಸ್ಥಿತ ಸುಧಾರಣೆಯಾಗಬೇಕಿದೆ. ಅವುಗಳೇನೆಂದರೆ ಪ್ರಪಂಚದಾದ್ಯಂತ ಬ್ರಾಂಡ್ಗಳ ಸ್ವಯಂ ಕೋಡ್ ಆಫ್ ಕಾಂಡಕ್ಟ್ ಜಾಗದಲ್ಲಿ ಎನ್ಫೋರ್ಸಿಬಲ್ ಒಪ್ಪಂದಗಳನ್ನು ಸ್ಥಾಪಿಸುವುದು ಮತ್ತು ಶೋಷಣೆಗೆ ಕಾರಣವಾದ, ಸಪ್ಲೈಯರ್ಗಳ ಮೇಲೆ ದರಗಳ ಒತ್ತಡವನ್ನು ಕೊನೆಗೊಳಿಸುವುದು. ಈ ಕಾರ್ಯಸೂಚಿಯನ್ನು ಮುನ್ನೆಲೆಗೆ ತರಲು ನಾವು ಕಾರ್ಯತಂತ್ರಗಳನ್ನು ರೂಪಿಸುತ್ತೇವೆ.
Uyghur ನಲ್ಲಿ ಬಲವಂತದ ದುಡಿಮೆಯನ್ನು ಕೊನೆಗೊಳಿಸುವ ಒಪ್ಪಂದಗಳು, Lesotho ನಲ್ಲಿರುವ Nien Hsing ನ ಎಲ್ಲ ಕಾರ್ಮಿಕರನ್ನು ಒಳಗೊಂಡ ಲಿಂಗಾಧಾರಿತ ಶೋಷಣೆ ಮತ್ತು ಕಿರುಕುಳಗಳ ಬಗ್ಗೆ ಒಪ್ಪಂದ, ಇಂಟರ್ನ್ಯಾಷನಲ್ ಸೇಫ್ಟಿ ಅಕಾರ್ಡ್, ದಿ ಅಲ್ಟ್ರಾ ಗ್ರೇಶಿಯಾ ಲಿವಿಂಗ್ ವೇಜ್ ಅಪಾರೆಲ್ ಫ್ಯಾಕ್ಟರಿ ಮತ್ತು ಹ್ಯಾಂಡುರಾಸ್ನ ಫ್ರೂಟ್ ಆಫ್ ಲೂಮ್ನ ಕಾರ್ಮಿಕರಿಗೆ ಸಂಘಟನಾ ಸ್ವಾತಂತ್ರ್ಯ ಮತ್ತು ಸಾಮೂಹಿಕ ಚೌಕಾಸಿಯ ಹಕ್ಕನ್ನು ಖಾತ್ರಿ ಪಡಿಸುವ ಯೂನಿಯನ್ ಮತ್ತು ಮ್ಯಾನೇಜ್ಮೆಂಟ್ ಒಪ್ಪಂದಗಳನ್ನೂ ಸೇರಿದಂತೆ ಕಳೆದ ದಶಕದಲ್ಲಿ ಕಾರ್ಮಿಕ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ನಡೆದ ಹಲವಾರು ಸಾಧನೆಗಳಲ್ಲಿ ನಾವು ಪ್ರಮುಖ ಪಾತ್ರ ವಹಿಸಿದ್ದೇವೆ.